Wednesday 24 June 2015

ಬಾಲಕಿಯರಿಗೆ ಕೀಟಲೆ: ಬಜರಂಗದಳ ಗೂಸಾ

ಕಾರ್ಕಳ: ಬಾಲಕಿಯರನ್ನು ಪುಸಲಾಯಿಸಿ ಅವರಿಗೆ ಕೀಟಲೆ ಕೊಡುತ್ತಿದ್ದ  ಯುವಕನೊಬ್ಬನಿಗೆ ಬಜರಂಗದಳದ ಕಾರ್ಯಕರ್ತರು ತಪರಾಕಿ ಬಾರಿಸಿದ ಘಟನೆ ತೆಳ್ಳಾರು ಐದನೇ ಅಡ್ಡ ರಸ್ತೆಯಲ್ಲಿ ರವಿವಾರ ಮಧ್ಯಾಹ್ನ ವೇಳೆಗೆ ನಡೆದಿದೆ. 

ತೆಳ್ಳಾರಿನ ಸೌದತ್(17) ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ಮೀಸೆ ಚಿಗುರುವ ಮುನ್ನ ತನ್ನ ಧೂರ್ತಬುದ್ದಿ ತೋರಿಸಲು ಮುಂದಾಗಿ ತಕ್ಕಶಾಸ್ತ್ರಿಗೊಳಗಾಗಿದ್ದನು. 

ರವಿವಾರ ಮಧ್ಯಾಹ್ನದ ವೇಳೆಗೆ ಕಾರ್ಕಳದ ಶಾಲಾ ಬಾಲಕಿಯರಿಬ್ಬರನ್ನು ಕಾರೊಂದರಲ್ಲಿ ದುರ್ಗದ ದುರ್ಗಮ ಪ್ರದೇಶಕ್ಕೆ ಕರೆದೊಯ್ಯುವ ಪ್ರಯತ್ನ ನಡೆಸಿದ್ದನು. ಅದಕ್ಕಾಗಿ ಆತ ತನ್ನ ಸಂಬಂಧಿಕರೊಬ್ಬರ ಕಾರನ್ನು ದುರ್ಬಳಕೆ ಮಾಡಿಕೊಂಡು ತಾನೇ ಚಲಾಯಿಸಿಕೊಂಡು ವೆಂಡರ್ ಓಣಿಯ ಮೂಲಕವಾಗಿ ದುರ್ಗಕ್ಕೆ ತೆರಳಲು ಸಿದ್ಧತೆ ನಡೆಸಿದ್ದನು. 

ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಸೌದತ್ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ಹಿಂಬಾಲಿಸಿ ತೆಳ್ಳಾರು ಐದನೇ ಅಡ್ಡ ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ. 
ಕಾರಿನಲ್ಲಿದ್ದ ಇಬ್ಬರು ವಿದ್ಯಾಥರ್ಿಗಳ ವಿಳಾಸ ಪಡೆದ ಬಜಗಂಗಿಗಳು ಅವರನ್ನು ಹೆತ್ತವರಿಗೊಪ್ಪಿಸುವ ಮಾನವೀಯತೆ ಮೆರೆದು ಆರೋಪಿ ಸೌದತ್ನನ್ನು ನಗರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. 
ಆರೋಪಿಯ ಸಂಪೂರ್ಣ ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆಂಬ ಮಾಹಿತಿ ಲಭಿಸಿದೆ.
ಅಪ್ಪನಿಗೆ ಕೈ ಎತ್ತಿದ ಆರೋಪಿ
ಆರೋಪಿ ಸೌದತ್ ಸೋಮವಾರ ಬೆಳಿಗ್ಗೆ ಮತ್ತೇ ತನ್ನ ಚಾಳಿ ಮುಂದುವರಿಸಿದ್ದು, ತಂದೆಯೇ ಆತಗಿಗೆ ಚಾಸುಂಡೆ ಬಾರಿಸಿದ ಘಟನೆ ಕಾರ್ಕಳ ವಿಸ್ತೃತ ಬಸ್ನಿಲ್ದಾಣದ ಪರಿಸರದಲ್ಲಿ ನಡೆದಿದೆ. 

ಬಜರಂಗಿಗಳ ದಾಳಿಯಲ್ಲಿ ಸಿಲುಕಿ ಪೊಲೀಸರ ವಶದಲ್ಲಿ ಸೌದತ್ನ ಬಿಡುಗಡೆಗೆ ಆತನ ತಂದೆ ಇನ್ನಿಲ್ಲದ ಪ್ರಯತ್ನ ನಡೆದಿದ್ದಾರೆ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಅವರು ಉತ್ತಮ ನಡೆತೆಯವರು. ಇದೇ ಕಾರಣದಿಂದಾಗಿ ಪೊಲೀಸರು ಸೌದತ್ನ ವಿರುದ್ಧ ಮುಚ್ಚಳಿಕೆ ಬರೆಸಿ ಮನೆಗೆ ಕಳುಹಿಸಲು ಕಾರಣವಾಗಿದೆ. 
 ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ಬೈಕ್ವೊಂದರಲ್ಲಿ ಸೌದತ್ ವಿಸ್ತೃತ ಬಸ್ ನಿಲ್ದಾಣ ಬಳಿಯಲ್ಲಿ ಠಳಾಯಿಸುತ್ತಿದ್ದನು. 

ಇದನ್ನು ಗಮನಿಸಿದ ಆತನ ತಂದೆ ಬಸ್ನಿಲ್ದಾಣದ ಮುಂಭಾಗದಲ್ಲಿಯೇ ಮಗನ ಕೆನ್ನೆಗೆ ಬಾಸುಂಡೆ ಬಾರಿಸಿದ್ದರು. ನಿನ್ನೆ ತಪರಾಕಿ ತಿಂದ ಘಟನೆಯ ಕಹಿನೆನೆಪು ಮಾಸುವ ಮುನ್ನ ಮತ್ತೇ ಅದೇ ಚಾಳಿ ಮುಂದುವರಿಸಿದ್ದೀಯಾ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ತನ್ನ ತಪ್ಪನ್ನು ಒಪ್ಪಿಕೊಳ್ಳದ ಸೌದತ್ ಹಿಂದೆ ಮುಂದೆ ನೋಡದೇ ತಂದೆಗೆ ಕೈಎತ್ತಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಸೌದತ್ನಿಗೆ ತಪರಾಕಿ ಬಾರಿಸಿದ್ದಾರೆ.
ಪೊಲೀಸರು ನಿಗಾವಹಿಸಬೇಕಾಗಿದೆ
 ಶಾಲಾ ಕಾಲೇಜು ಆರಂಭಗೊಳ್ಳುತ್ತಿದ್ದಂತೆ ವಿದ್ಯಾಥರ್ಿನಿಯರನ್ನು  ಗುರಿಯಾಗಿರಿಸಿ ಭೇಟಿಯಾಡುವ ತಂಡ ಮತ್ತೇ ಸಕ್ರಿಯಾಗೊಂಡಿದೆ. ಕೋಮುಸಂಘರ್ಷಗಳಿಗೆ ಎಡೆಮಾಡಿರುವ ಕಾರ್ಕಳದಲ್ಲಿ ಇಂತಹ ಘಟನಾವಳಿಯಿಂದ ಅಶಾಂತಿಗೂ ಕಾರಣವಾಗಲಿದೆ. ಈ ಬಗ್ಗೆ ಪೊಲೀಸ್ ಇಲಾಖೆಯು ನಿಗಾವಹಿಸಬೇಕಾಗಿದೆ.

No comments:

Post a Comment